ಭೂಔಷ್ಣೀಯಶಕ್ತಿs

ಭೂಗರ್ಭದಲ್ಲಿಯ ನೈಸರ್ಗಿಕ ಔಷ್ಣೀಯಶಕ್ತಿ (ಜಿಯೊಥರ್ಮಲ್ ಎನರ್ಜಿ). ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಸೌರನೀಹಾರಿಕೆಯಲ್ಲಿ ಸೂರ್ಯ ಮತ್ತು ಗ್ರಹಗಳು ರೂಪುಗೊಂಡಾಗ ಆ ಆದಿಮ ಭೂಮಿಯಲ್ಲಿ ಅತ್ಯಧಿಕ ಉಷ್ಣ ಸಂಚಯನಗೊಂಡಿತ್ತು. ಸಹಸ್ರಾರು ಲಕ್ಷವರ್ಷಗಳ ಅವಧಿಯಲ್ಲಿ ಜರಗಿದ ನೈಸರ್ಗಿಕ ವಿಕಿರಣಪಟು ಧಾತುಗಳ ಕ್ಷಯದಿಂದಲೂ ಭೂಗರ್ಭದಲ್ಲಿಯೇ ಇರುವ ಅತಿ ಸಾಂದ್ರತೆಯ ವಸ್ತುಗಳ ಕ್ರಮಿಕ ವಿಯೋಜನೆಯಿಂದ ಉದ್ಭವಿಸಿದ ಶಕ್ತಿಯ ಘರ್ಷಣೀಯ ಕ್ಷಯದಿಂದಲೂ (ಫ್ರಿಕ್ಷನಲ್ ಡಿಸ್ಸಿಪೇಷನ್) ಈ ಉಷ್ಣ ಉಂಟಾಗಿದೆ. ಶ್ವೇತೋಷ್ಣದಿಂದ (ಹ್ವೈಟ್ ಹಾಟ್) ಕೂಡಿದ ಭೂಗರ್ಭವನ್ನು ಭೂಮಿಯ ಹೊರಪದರ ಮತ್ತು ತೊಗಟೆಗಳಲ್ಲಿಯ ಶಿಲೆಗಳ ಅತ್ಯುತ್ತಮ ರೋಧನ (ಇನ್ಸುಲೇಟಿಂಗ್) ಗುಣಗಳು ಸಂರಕ್ಷಿಸಿವೆ. ದೀರ್ಘಾವಧಿಯ ಭೂವೈಜ್ಞಾನಿಕ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಲಿದ್ದರೂ ಭೂಮಿಯ ದ್ರವರೂಪಿ ಗರ್ಭ ಮತ್ತು ಹೊರಪದರ ಆರಿ ಹೋಗದಿರುವಷ್ಟರಮಟ್ಟಿಗೆ ಕಡಿಮೆಯಾಗಿಯೇ ಬಹುತೇಕ ಶಿಲೆಗಳ ಔಷ್ಣೀಯ ಸಂವಹನತೆ ಇದೆ. ಭೂಮಿಯ ಆಂತರಿಶಕ್ತ್ಯುತ್ಪಾದನೆಯ ದೀರ್ಘ ಇತಿಹಾಸ ಮತ್ತು ಹೊರಗಿನ ಆಕಾಶಕ್ಕೆ ಶಕ್ತಿ ತಪ್ಪಿಸಿಕೊಂಡು ಹೋಗುವುದು ಇವು ಇಡೀ ಭೂಗೋಳದ ಮೇಲೆ ನೈಸರ್ಗಿಕ ಉಷ್ಣಪ್ರವಾಹಕ್ಕೆ ಎಡೆಮಾಡಿಕೊಟ್ಟಿವೆ. 

	ಉಷ್ಣಪ್ರವಾಹದ ಏಕಮಾನ: 1 ಮೈಕ್ರೊಕೆಲೊರಿ/ಚದರಸೆಂಟಿಮೀಟರ್/ಸೆಕೆಂಡ್. ಖಂಡಗಳ ಮತ್ತು ಸಾಗರಗಳ ಮೇಲಿನ ಉಷ್ಣಪ್ರವಾಹದ ಸರಾಸರಿಯಾದರೂ ಭೂಮೇಲ್ಮೈಯ ಉಷ್ಣಪ್ರವಾಹದ ಸರಿಸುಮಾರು ಅರ್ಧದಿಂದ  ಭಾಗದಷ್ಟು ಇರುವುದು. ಭೂಗೋಳದ ಸರಾಸರಿಗಿಂತಲೂ ಅಧಿಕವಾಗಿರುವ (10 ಕ್ಕೂ ಹಚ್ಚು) ನೈಸರ್ಗಿಕ ಉಷ್ಣಪ್ರವಾಹಗಳು ಕಂಡುಬರುವ ಪ್ರದೇಶಗಳೂ ಇವೆ. ಉದಾಹರಣೆಗೆ ಜ್ವಾಲಾಮುಖಿಗಳು ಮತ್ತು ನೆಲಬಿರುಕಿನ ಕವರಿಗಳು (ರಿಫ್ಟ್ ವ್ಯಾಲೀಸ್). ಇಂಥಲ್ಲಿ ಭೂಗರ್ಭದಿಂದ ಶಿಲಾಪಾಕ ಮೇಲ್ಮೈಗೆ ಏರುತ್ತ ಹೋಗುತ್ತದೆ. ಈ ಪ್ರದೇಶಗಳಲ್ಲಿ ದ್ರವರೂಪದ ಬಲು ಆಳದಿಂದ ಭೂಮೇಲ್ಮೈಗೂ ಭೂಮೇಲ್ಮೈಯ ತೀರ ಸಮೀಪಕ್ಕೂ ದೊಡ್ಡ ಗಾತ್ರದ ರಾಶಿ ಹಾಗೂ ಔಷ್ಣೀಯ ಶಕ್ತಿ ವರ್ಗಾವಣೆಯಾಗುತ್ತದೆ. 

	ಭೂಔಷ್ಣೀಯಶಕ್ತಿಯ ಪ್ರಕಟಿತರೂಪ ಎಂದರೆ ಕೆಲವೆಡೆ ಕಂಡುಬರುವ ಕುದಿಯುವನೀರಿನ ಬುಗ್ಗೆಗಳು. ಬಿಸಿನೀರಿನರೂಪದಲ್ಲಿ ಹೇರಳವಾಗಿ ದೊರೆಯುವ ಔಷ್ಣೀಯ ಶಕ್ಕಿಯನ್ನು ಬಳಸಿಕೊಳ್ಳಲು ಪ್ರಯತ್ನ ಬಲು ಹಿಂದಿನಿಂದ ನಡೆದು ಬಂದಿದೆ. ಅಮೆರಿಕ ಸಂಯುಕ್ತಸಂಸ್ಥಾನಗಳು, ಇಟಲಿ, ಐರ್ಲೆಂಡ್, ನ್ಯೂಜಿûೀಲೆಂಡ್, ಜಪಾನ್, ಮೆಕ್ಸಿಕೋ, ಇಂಡೊನೇಷ್ಯ ಈ ಮೊದಲಾದ ದೇಶಗಳಲ್ಲಿ ಔಷ್ಣೀಯ ಶಕ್ತಿಬಳಸಿ ವಿದ್ಯುತ್ತು ಉತ್ಪಾದಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಬುಗ್ಗೆಗಳ ಪಕ್ಕದಲ್ಲಿ ರಂಧ್ರಗಳನ್ನು ಕÉೂರೆದು, ಹಬೆಯನ್ನು ಕೊಳವೆಗಳ ಮೂಲಕ ಸಾಗಿಸಿ, ಆ ಶಕ್ತಿಯಿಂದ ತಿರುಬಾನಿ ಚಕ್ರ ತಿರುಗುವಂತೆ ಮಾಡಿ ವಿದ್ಯುತ್ತು ಉತ್ಪಾದಿಸುತ್ತಾರೆ. ಜ್ವಾಲಾಮುಖಿಗಳಿರುವ ಪ್ರಾಂತ್ಯಗಳಲ್ಲಿ ಕುದಿಯುತ್ತಿರುವ ಶಿಲಾಪಾಕ ಕಡಿಮೆ ಆಳದಲ್ಲಿ ಇರುತ್ತದೆ. ಇಂಥಲ್ಲಿ ಒಳಗಿನ ಔಷ್ಣೀಯ ಶಕ್ತಿ ಹಬೆಯ ರೂಪದಲ್ಲಿ ಹೊರಕಾಣಿಸಿಕೊಳ್ಳುತ್ತದೆ. 

	ಬಿಸಿ ನೀರಿನ ಬುಗ್ಗೆಗಳು ಭಾರತದಲ್ಲಿ ಮುಖ್ಯವಾಗಿ ಪಂಜಾಬ್, ಬಿಹಾರ್, ಆಸ್ಸಾಮ್ ಮತ್ತು ಹಿಮಾಲಯದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಇವೆ. ಮುನ್ನೂರಕ್ಕೂ ಹೆಚ್ಚು ಸಂಖ್ಯೆಯ ಬಿಸಿನೀರಿನ ಬುಗ್ಗೆಗಳನ್ನು ಈ ಪ್ರಾಂತಗಳಲ್ಲಿ ಪತ್ತೆ ಹಚ್ಚಿದ್ದಾರೆ. ಕೆಲವು ಬುಗ್ಗೆಗಳಲ್ಲಿಯ ಔಷ್ಣೀಯಶಕ್ತಿಯ ಉಷ್ಣತೆ 49ಲಿಅ ನಷ್ಟಿರುತ್ತದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದ ಬಳಿ ಬಿಸಿ ನೀರಿನ ಊಟೆ ಒಂದಿದೆ. ಇಲ್ಲಿಯ ನೀರಿನ ಉಷ್ಣತೆ ಅಷ್ಟೇನೂ ಹಚ್ಚಿಲ್ಲ ಉಗುರು ಬೆಚ್ಚಗೆ ಇದೆ, ಅಷ್ಟೆ.

	ಪೆಟ್ರೋಲ್, ಕಲ್ಲಿದ್ದಲುಗಳಂತೆ ಬಿಸಿನೀರು ಅಥವಾ ಹಬೆಯನ್ನು ಬಲುದೂರ ಸಾಗಿಸುವುದು ಸಾಧ್ಯವಿಲ್ಲ. ಏನಿದ್ದರೂ ಅದರ ಉಪಯೋಗ ಆ ಶಕ್ತಿ ಲಭ್ಯವಾಗುವ ಸುತ್ತಮುತ್ತ ಮಾತ್ರ. ಉಷ್ಣದಿಂದ ಕೂಡಿದ ನೀರಿನಲ್ಲಿ ಇತರ ಖನಿಜಾಮ್ಲಗಳೂ ವಿಲೀನವಾಗಿರುತ್ತವೆ. ಈ ಕಾರಣ ಉಷ್ಣದಿಂದ ಕೂಡಿದ ನೀರನ್ನು ಸಾಗಿಸಲು ಬಳಸುವ ಕೊಳವೆಗಳು ತುಕ್ಕುಹಿಡಿದು ಅವುಗಳಲ್ಲಿ ರಂಧ್ರಗಳೂ ಏರ್ಪಡುತ್ತವೆ. ಭೂಔಷ್ಣೀಯಶಕ್ತಿಯ ಬಳಕೆಯಲ್ಲಿ ಇದೊಂದು ಮುಖ್ಯ ಕೊರತೆ.

	ಭೂಮಿಯಲ್ಲಿ ಆಳಕ್ಕೆ ಹೋದಂತೆಲ್ಲ ಉಷ್ಣ ಹೆಚ್ಚುತ್ತವೆ. ಪ್ರತಿಯೊಂದು ಕಿಲೊಮೀಟರ್ ಆಳದಲ್ಲಿ ಉಷ್ಣತೆ 25ಲಿ ಅಥವಾ 30ಲಿಅ ನಷ್ಟು ಏರುವುದು. ಕರ್ನಾಟಕ ರಾಜ್ಯದ ಕೋಲಾರ ಗಣಿಪ್ರದೇಶದಲ್ಲಿಯ ಮೇಲುಭಾಗದ ಉಷ್ಣತೆ 36ಲಿಅ ಇಲ್ಲಿಯ ಗಣಿಗಳ ಆಳ ಸುಮಾರು 3 ಕಿಲೊಮೀಟರ್. ಗಣಿಯ ಕೆಳಭಾಗದ ಕೆಳಭಾಗದ ಕ್ಷೇತ್ರಗಳಲ್ಲಿ ಕಲ್ಲು ಕಾದು ನೀರು ಹಬೆಯಾಗುವ ಸ್ಥಿತಿಯಲ್ಲಿದೆ. ಹಬೆಯಿಂದ ವಿದ್ಯುತ್ತನ್ನು ಉತ್ಪಾದಿಸಬೇಕಾದರೆ ಉಷ್ಣತೆ 150ಲಿ ಅಯಷ್ಟಾದರೂ ಇರಬೇಕು. ಈ ಉಷ್ಣತೆ ಪಡೆಯಲು ಐದು ಆರು ಕಿಲೊಮೀಟರ್ ಆಳಕ್ಕೆ ಇಳಿಯಬೇಕಾಗುತ್ತದೆ. ಆ ಆಳ ಮುಟ್ಟುವಂತೆ ಸಾಧ್ಯವಾಗುವ ರಂಧ್ರ ಕೊರೆಯುವುದು ಅಗತ್ಯ. ಭೂಮಿಯ ಒಳಗಡೆ ಅಡಗಿರುವ ಔಷ್ಣೀಯಶಕ್ತಿಯೇನೊ ಅಪಾರ. ಆದರೆ ಅದನ್ನು ಸುಲಭ ರೀತಿಯಲ್ಲಿ ಪಡೆಯುವ ಯಂತ್ರ ಕೌಶಲದ ಮಾರ್ಗಕ್ರಮಣ ಆಗುತ್ತಲೇ ಇದೆ. ರಂಧ್ರ ಕೊರೆಯಲು ಅಪಾರ ಹಣ ವ್ಯಯವಾಗುತ್ತದಾಗಿ ಅದೇ ಕಾರಣವಾಗಿಯೇ ಮೊದಲಿಗೆ ಜ್ವಾಲಾಮುಖಿಗಳು ಇರುವಂಥ ಪ್ರದೇಶಗಳಲ್ಲೇ ಲಭ್ಯವಾಗುವ ಔಷ್ಣೀಯ ಶಕ್ತಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದುವು. ಈ ಪ್ರದೇಶಗಳಲ್ಲಿ ಮೂರು ಸಾವಿರ ಮೀಟರ್ ಆಳದಷ್ಟು ರಂಧ್ರ ಕೊರೆದಾಗ 800ಲಿಅ ಉಷ್ಣತೆ ಲಭ್ಯವಾಗಬಹುದು.

	ಕೃತಕ ರೀತಿಯಲ್ಲಿ ಭೂಮಿಯೊಳಗಿನ ಶಿಲೆಗಳು ಛಿದ್ರವಾಗುವಂತೆ ಮಾಡಿ ಅಂಥ ಛಿದ್ರಬಿರುಕುಗಳ ಮೂಲಕ ನೀರು ಹರಿಯುವಂತೆ ಮಾಡಿದರೆ ಭೂಉಷ್ಣದ ಉತ್ಪಾದನೆ ಸಾಧ್ಯ ಉಂಟು. ಇದರಿಂದ ವಿದ್ಯುತ್ತನ್ನೂ ಪಡೆಯಹುದು.  
   (ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ